Saturday, January 2, 2010

ಚಿತ್ರದುರ್ಗ

ಬೆಂಗಳೂರಿನಲ್ಲಿ ಎರಡು ದಿನಗಳನ್ನು ಸ್ನೇಹಿತರ ಜೊತೆ ಕಳೆದ ನಂತರ ಮುಂದಿನ ನಿಲುಗಡೆ ಚಿತ್ರದುರ್ಗ. ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ರೈಲು ಬಂಡಿಯ ಸಹಾಯ ಪಡೆಯುವುದು ಎಂದು ತೀರ್ಮಾನವಾಯಿತು. ಆದರೆ ಟಿಕೆಟ್ ಕಾದಿರಿಸುವ ವ್ಯವಸ್ತೆ ನಮ್ಮ ಅಮೂಲ್ಯ ಸಮಯವನ್ನು ತಿನ್ನುವ ಎಲ್ಲಾ ಲಕ್ಷಣಗಳು ಕಂಡು ಬಂದಾಗ ರೈಲು ಬಂಡಿಗೆ ಬೈ ಬೈ ಹೇಳಿ ಬಸ್ ಹತ್ತುವ ಸೂಕ್ತ ನಿರ್ಧಾರ ಕೈಗೊಂಡರು.

ಕತ್ತಲೆಯನ್ನು ಸೀಳಿ ಸಾಗಿದ ಕ.ರಾ.ರ.ಸಾ. ಸ೦. ಯ ರಾಜಹಂಸ ಬಸ್ ಚಿತ್ರದುರ್ಗ ತಲುಪಿದಾಗ ಅಪರಾತ್ರಿ!! ಮೊದಲೇ ಮಾಡಿಕೊಂಡ ವ್ಯವಸ್ತೆಯ ಪ್ರಕಾರ ನಮ್ಮ ದುರ್ಗದ ಗೆಳೆಯ ಪ್ರಶಾಂತ್ ತನ್ನ ಮನೆಯಲ್ಲಿ ನಮಗಾಗಿ ನಿದ್ದೆ ಬಿಟ್ಟು ಕಾಯುತ್ತಿದ್ದ. ಅತ್ತ ಬೆಳಕೂ ಇಲ್ಲದ ಇತ್ತ ಕತ್ತಲೆಯೂ ಅನ್ನಲಾಗದ ವಿಚಿತ್ರ ಸಮಯದಲ್ಲಿ ನಾವು ಅವನಿಗೆ ಫೋನ್ ಮಾಡಿ ನಾವು ಬಂದಿರುವುದನ್ನು ಅರುಹಿದೆವು. ರಿಕ್ಷಾ ಹಿಡಿದು, ಪ್ರಶಾಂತ್ ನೀಡಿದ ವಿಳಾಸದ ಜಾಡನ್ನು ಹಿಡಿದು ಕೊನೆಗೂ ಮನೆ ಸೇರಿದೆವು. ಸಮಯ ಮುಂಜಾನೆ ೩:೦೦, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಬೆಳಗ್ಗಿನ ದುರ್ಗಾರೋಹಣಕ್ಕೆ ಸಿದ್ದತೆ ಶುರು ಮಾಡಿದ್ದೊಂದು ನೆನಪು... ಆಮೇಲಿನ ದುರ್ಗದ ಕಲ್ಲಿನ ಕೋಟೆಯ ರಮಣೀಯ ದೃಶ್ಯಗಳ ಬೇಟೆ.... ಈಗ ನೆನಪುಗಳ ಮೂಟೆ!




ಚಿತ್ರದುರ್ಗದ ನಂತರ ಮೂರನೆಯ ಹೆಜ್ಜೆ ಹುಬ್ಬಳ್ಳಿ..............

No comments:

Post a Comment